ಇಂದು (ಮೇ.19) ಬೆಳಿಗ್ಗೆಯಿಂದ ಸಂಜೆಯವರೆಗೆ ಬೆತ್ತೋಡಿ ಮಖಾಂ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.19. ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಬೆತ್ತೋಡಿ ಮಖಾಂ ಉರೂಸ್ ಇಂದು ಬೆಳಿಗ್ಗೆ 9 ರಿಂದ ಆರಂಭಗೊಂಡು ಸಂಜೆ 4.30ರ ವರೆಗೆ ನಡೆಯಲಿದೆ.

ಜಾತಿ ಮತ ಭೇದವಿಲ್ಲದೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಹೆಸರುವಾಸಿಯಾದ ಬೆತ್ತೋಡಿಯಲ್ಲಿ ಲುಹರ್ ನಮಾಝ್ ನ ಬಳಿಕ ಮರ್ಧಾಳ ಬದ್ರಿಯಾ ಜುಮಾ‌ ಮಸೀದಿಯ ಖತೀಬರಾದ ಹನೀಫ್ ಸಖಾಫಿಯವರ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಲಿದ್ದು, ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುವಾ ನೆರವೇರಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ ದಿನಸಿ ಅಂಗಡಿ ಬೆಂಕಿಗಾಹುತಿ… ಸುಟ್ಟು ಕರಕಲಾದ ಅಂಗಡಿ ಸಾಮಗ್ರಿ

error: Content is protected !!
Scroll to Top