ಪಡ್ಡೆ ಹುಡುಗರ ನಿದ್ದೆಗೆಡಿಸಿದ ವೈರಲ್ ಸ್ಟಾರ್ ಪ್ರಿಯಾ ವಾರಿಯರ್ ಅಭಿನಯದ ಹಾಡಿಗೆ ವಿರೋಧ ► ಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಹೈದರಾಬಾದ್, ಫೆ.14. ಪಡ್ಡೆ ಹುಡುಗರ ನಿದ್ದೆಗೆಡಿಸಿ ದಿನ ಬೆಳಗಾಗೋದ್ರಲ್ಲಿ ಸುದ್ದಿಗೆ ಬಂದ ಚೆಂದುಳ್ಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿರುವ ಹಾಡಿನಲ್ಲಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ಧಗಳಿವೆ ಎಂದು ಹಾಡಿನ ವಿರುದ್ಧ ದೂರು ದಾಖಲಾಗಿದೆ.

ಹಾಡಿನಲ್ಲಿರುವ ಕೆಲವು ಶಬ್ಧಗಳು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ನಾಲ್ಕೈದು ಯುವಕರು ಹಾಡಿನ ನಿರ್ಮಾಪಕರ ವಿರುದ್ಧ ಹೈದರಾಬಾದ್ ನ ಫಾರೂಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ನಟಿ ಪ್ರಿಯಾ ವಿರುದ್ಧ ಯಾವುದೇ ದೂರಿಲ್ಲ. ಹಾಡಿನಲ್ಲಿ ಬಳಸಿರುವ ಶಬ್ಧಕ್ಕೆ ಮಾತ್ರ ವಿರೋಧ ವ್ಯಕ್ತವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Also Read  ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಸೆ.30 ರಂದು ಸುಪ್ರೀಂನಲ್ಲಿ ವಿಚಾರಣೆ

error: Content is protected !!