ನಮ್ಮ ನಾಡು ಶ್ರೀಗಂಧದ ನಾಡಾಗಲಿ- ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಕೆ. ಅಮರನಾರಾಯಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 29. ವಿಶ್ವಸಂಸ್ಥೆ ವರದಿ ಪ್ರಕಾರ  ನಮ್ಮ ದೇಶದಲ್ಲಿ ಕಾಡಿನ  ಪ್ರಮಾಣ 33 ಶೇಕಡಾ  ಇರಬೇಕಾಗಿದ್ದು, ಸದ್ಯ  ನಮ್ಮ ಭಾರತದಲ್ಲಿ  ಇದು 23 ಶೇಕಡಾ  ಅರಣ್ಯ ಇದೆ. ನಮ್ಮ ರಾಜ್ಯ ಕರ್ನಾಟಕದಲ್ಲಿ  21 ಶೇಕಡಾ  ಅರಣ್ಯ  ಅದೆ.  ನೈಸರ್ಗಿಕ  ಕಾಡು  ಹೋಗಿ  ಕಾಂಕ್ರೀಟ್  ಕಾಡು  ಬೆಳೆದು  ನಿಂತಿದೆ. 2019ರಲ್ಲಿ ದ.ಕ. ಜಿಲ್ಲೆಯಲ್ಲಿ  44 ಶೇಕಡಾ  ಕಾಡು ಇತ್ತು. ಅದು ಈಗ 26 ಶೇಕಡಾಕ್ಕೆ ಇಳಿದಿದೆ. ದೇಶದೆಲ್ಲೆಡೆ ಅರಣ್ಯಗಳ ಅನುಪಾತ ಇಳಿಮುಖವಾಗುತ್ತಿದೆ.  ಈ ಹಿನ್ನೆಲೆಯಲ್ಲಿ  ಎಲ್ಲರೂ  ಬಹಳ ಜಾಗೃತರಾಗಿ ಪರಿಸರದ ಬಗ್ಗೆ  ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ವಹಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ವನಕೃಷಿ ಮತ್ತು ಶ್ರೀಗಂಧದ ಸಂರಕ್ಷಣಾ ಸಮಿತಿ ಇದರ ರಾಜ್ಯಾಧ್ಯಕ್ಷರಾದ ಶ್ರೀ ಅಮರನಾರಾಯಣ  ಅವರು ನುಡಿದರು.  ಈ ಹಿಂದೆ  ನಮ್ಮ  ರಾಜ್ಯವನ್ನು ಶ್ರೀಗಂಧದ ನಾಡು, ಚಂದನದ ಬೀಡು ಎಂದು ವರ್ಣಿಸಿದ್ದಾರೆ. ಆದರೆ  ಈಗ ಶ್ರೀಗಂಧದ  ಮರಗಳು ಕಾಣೆಯಾಗಿ ಶ್ರೀಗಂಧದ ನಾಡು ಎಂಬ ಹೆಸರು ಅಪಹಾಸ್ಯವಾಗಿದೆ. ನೀವೆಲ್ಲಾ ಸೇರಿ ಹೆಚ್ಚು ಶ್ರೀಗಂಧದ ಗಿಡ ನೆಟ್ಟು ಬೆಳೆಸಿ, ಮಗದೊಮ್ಮೆ ನಮ್ಮ ನಾಡನ್ನು ಶ್ರೀಗಂಧದ ನಾಡಾಗಿ ಪರಿವರ್ತಿಸಬೇಕು ಎಂದು ಗೃಹರಕ್ಷಕ ದಳದ ಕಛೇರಿಯಲ್ಲಿ ನಡೆದ ಶ್ರೀಗಂಧ ಸಂರಕ್ಷಣಾ ಆಂದೋಲನ ಕಾರ್ಯಕ್ರಮದಲ್ಲಿ ಶ್ರೀ ಅಮರನಾರಾಯಣ ಅವರು ಖ್ಯಾತ ಪರಿಸರವಾದಿ ಶ್ರೀ ಮಾಧವ ಉಳ್ಳಾಲ ಅವರಿಗೆ ಶ್ರೀಗಂಧದ  ಗಿಡ ಹಸ್ತಾಂತರಿಸುವ ಮುಖಾಂತರ  ಚಾಲನೆ ನೀಡಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಪರಿಸರವಾದಿ ಶ್ರೀ ಕೃಷ್ಣಪ್ಪ, ಮಂಗಳೂರು, ಘಟಕಾಧಿಕಾರಿ ಶ್ರೀ ಮಾರ್ಕ್‍ಶೇರಾ, ಚಿಕ್ಕಮಗಳೂರಿನ ದಂತ ವೈದ್ಯರಾದ ಡಾ|| ಸುಂದರಗೌಡ ತರೀಕೆರೆಯ ಪರಿಸರವಾದಿ  ಶ್ರೀ ವಿಶುಕುಮಾರ್ ಉಪಸ್ಥಿತರಿದ್ದರು. ಸಮಾದೇಷ್ಟ ಡಾ|| ಮುರಲೀಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.  ಡಾ|| ಚೂಂತಾರು ಮಾತನಾಡಿ, ಗೃಹರಕ್ಷಕರು ಈಗಾಗಲೇ  ಕಳೆದ 9 ವರ್ಷಗಳಲ್ಲಿ  ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ  ಉಚಿತವಾಗಿ ಶ್ರೀಗಂಧದ ಗಿಡ ದೊರಕಿದ್ದು, ಕನಿಷ್ಟ 500 ಶ್ರೀಗಂಧದ ಗಿಡ ನೆಟ್ಟು ಬೆಳೆಸಲು ಸಿದ್ದರಿದ್ದೇವೆ ಎಂದು ಆಶ್ವಾಸನೆ ನೀಡಿದರು. ಕಛೇರಿ ಆವರಣದಲ್ಲಿ ಎರಡು ಶ್ರೀಗಂಧದ ಗಿಡಗಳನ್ನು ನೆಟ್ಟು  ಸಾಂಕೇತಿಕವಾಗಿ ‘ಶ್ರೀಗಂಧ ಮತ್ತು ವನಕೃಷಿ ಸಂರಕ್ಷಣಾ’ ಆಂದೋಲನೆಗೆ ಚಾಲನೆ ನೀಡಲಾಯಿತು. ಗೃಹರಕ್ಷಕರಾದ ಶ್ರೀ ಸುನಿಲ್ ಕುಮಾರ್, ಜ್ಞಾನೇಶ್, ನಂದಿನಿ, ರಮೇಶ್, ದಿವಾಕರ್, ಸಂಜಯ್ ಹಾಗೂ ಇತರ ಪರಿಸರ ಪ್ರೇಮಿಗಳು ಈ ಸಮಾರಂಭದಲ್ಲಿ  ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group