MBA ಪರಿಕ್ಷೆಯಲ್ಲಿ ಉಷಾ ನಾಯಕ್ ಗೆ ಪ್ರಥಮ ರ್ಯಾಂಕ್‌

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಕಳೆದ 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ನಡೆಸಿದ ಅಂತಿಮ ಎಂಬಿಎ ಪರೀಕ್ಷೆಯಲ್ಲಿ ಯೆನೆಪೋಯ ಕಾಲೇಜಿನ ನಿರ್ವಹಣಾ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತ್ ಅವರ ಪತ್ನಿಯಾಗಿರುವ ಉಷಾ ನಾಯಕ್ ಅವರು ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಷಾ ನಾಯಕ್, ಮೂಡಬಿದ್ರೆ ಒಂಟಿಕಟ್ಟೆ ರವೀಂದ್ರ ನಾಯಕ್ ಹಾಗೂ ಜಯಶ್ರೀ ನಾಯಕ್ ಅವರ ಪುತ್ರಿ. ಮಾ. 03ರಂದು ನಡೆಯಲಿರುವ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಸ್ವೀಕರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Also Read  ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಕ್ರೀಡಾಕೂಟ ► ಸಮಾರೋಪ ಸಮಾರಂಭ

error: Content is protected !!
Scroll to Top