(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 26. ಪಿಕಪ್ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾ ಸಹಿತ ಇಬ್ಬರನ್ನು ಅಬಕಾರಿ ದಳದ ವಿಶೇಷ ತಂಡ ವಶಪಡಿಸಿಕೊಂಡ ಘಟನೆ ಪೆರ್ಲದಿಂದ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಕುಂಬಳೆ ಶಾಂತಿಪಳ್ಳದ ಶಹೀನ್ ರಹೀಂ (36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್ (32) ಎಂದು ಗುರುತಿಸಲಾಗಿದೆ. ಅಬಕಾರಿ ದಳದ ಸಿಬ್ಬಂದಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಂದ ಪಿಕಪ್ ವ್ಯಾನ್ ನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 107 ಕಿಲೋ ಗಾಂಜಾ ಪತ್ತೆಯಾಗಿದೆ.