(ನ್ಯೂಸ್ ಕಡಬ) neskadaba.com ಫೆ. 26. ಬಾಯಲ್ಲಿ ಹುಣ್ಣು ಎಂಬುವುದು ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಬಂತೆಂದರೆ ನಮಗೆ ಏನನ್ನೂ ತಿನ್ನಲು ಬಿಡುವುದಿಲ್ಲ. ಬಾಯಿ ಹುಣ್ಣು ಎಂಬುದು ಹೊಟ್ಟೆ ಸಮಸ್ಯೆ ಇದ್ದರೆ ಅಥವಾ ರಕ್ತ ಕೆಟ್ಟರೆ ಅಥವಾ ದೇಹದ ಉಷ್ಣ ಹೆಚ್ಚಾದರೆ ಹೀಗೆ ಬಾಯಲ್ಲಿ ಗುಳ್ಳೆ ಅಥವಾ ಹುಣ್ಣಾಗುತ್ತದೆ.
ಅದಕ್ಕಾಗಿ ಬಾಯಿ ಹುಣ್ಣು ಇರುವವರು ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಸಮತೋಲನದ ಆಹಾರ ಸೇವಿಸಿದಲ್ಲಿ ಹುಣ್ಣಿನ ಸಾಧ್ಯತೆ ಕಡಿಮೆ ಇರುತ್ತದೆ. ಹೆಚ್ಚಾಗಿ ನೀರು ಕುಡಿಯಬೇಕು. ವಿಟಮಿನ್ ಕೊರತೆ ಇದ್ದರೆ ಹೀಗೆ ಪದೇ ಪದೇ ಬಾಯಿ ಹುಣ್ಣು ಉಂಟಾಗುತ್ತದೆ. ಹಾಗಾಗಿ ವಿಟಮಿನ್ ಬಿ 12 ಬಿ1, ಕಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಬೆಳಗ್ಗೆ ಹಲ್ಲುಜ್ಜಿದ ಮೇಲೆ ಎರಡು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ತುಳಸಿ ಆಂಟಿ ಬ್ಯಾಕ್ಟೀರಿಯಾ ಹಾಗು ಆಂಟಿ ವೈರಲ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ಆಗಾಗ ತುಳಸಿ ಎಲೆಗಳನ್ನು ಅಗೆದು ಸೇವಿಸಿದರೆ ಬಾಯಿ ಹುಣ್ಣು ಆಗೋದನ್ನು ತಡೆಯಬಹುದು.