ಸಿಮೆಂಟ್ ಮಿಕ್ಸರ್ ಟ್ರಕ್ ಹರಿದು ಶಿಕ್ಷಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪಣಂಬೂರು, ಫೆ. 24. ಕಾಂಕ್ರೀಟ್ ಮಿಕ್ಸರ್ ಲಾರಿ ಹರಿದು ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಪಣಂಬೂರು ಬೀಚ್ ಬಳಿ ಶುಕ್ರವಾರದಂದು ನಡೆದಿದೆ.

ಮೃತ ಶಿಕ್ಷಕಿಯನ್ನು ಹೊನ್ನಕಟ್ಟೆ ನಿವಾಸಿ ಪೂರ್ಣಿಮಾ (29) ಎಂದು ಗುರುತಿಸಲಾಗಿದೆ. ಪೂರ್ಣಿಮಾ ತನ್ನ ಸಹೋದರಿಯ ಜೊತೆ ದ್ವಿಚಕ್ರ ವಾಹನದಲ್ಲಿ ಸಹ ಸವಾರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ, ಅವರಿದ್ದ ಸ್ಕೂಟರ್ ಪಣಂಬೂರು ಗೇಲ್ ಗ್ಯಾಸ್ ಬಂಕ್ ಬಳಿ ತಲುಪಿದಾಗ ಹಿಂದಿನಿಂದ ಎಡಭಾಗದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ನುಗ್ಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಸ್ಕೂಟರ್ ನ ಹ್ಯಾಂಡಲ್ ಗೆ ತಾಗಿದೆ. ಇದರಿಂದ ಸ್ಕೂಟರ್ ನಿಯಂತ್ರಣ ತಪ್ಪಿದ್ದು, ಪೂರ್ಣಿಮಾ ರಾಷ್ಟ್ರೀಯ ಹೆದ್ದಾರಿಗೆ ಉರುಳಿಬಿದ್ದಿದ್ದಾರೆ. ಈ ವೇಳೆ ಪೂರ್ಣಿಮಾರ ಮೈಮೇಲೆಯೇ ಸಿಮೆಂಟ್ ಟ್ರಕ್ ಹರಿದಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿದ್ದ ಪೂರ್ಣಿಮಾರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಲಾರಿ ಚಾಲಕ ದೀಪಕ್ ಸುನಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಕೊರೋನಾ ಸೋಂಕಿನ ಭೀತಿ ➤ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ..!

error: Content is protected !!
Scroll to Top