ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ನಿವಾಸಕ್ಕೆ ಕಸಾಪ ರಾಜ್ಯಾಧ್ಯಕ್ಷ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 23. ಕ.ಸಾ.ಪ ಇದರ  ರಾಜ್ಯ ಅಧ್ಯಕ್ಷರಾದ ಶ್ರೀ ನಾಡೋಜ ಡಾ ಮಹೇಶ್ ಜೋಷಿಯವರು  ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಅವರ ಮಂಗಳೂರಿನ ಕದ್ರಿಯ  ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು. ಕನ್ನಡ  ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಬಗ್ಗೆ ಮತ್ತು ಜನರ ಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ ಅನ್ನು ಹೇಗೆ ತಲುಪಬಹುದು ಎಂಬ ವಿಚಾರದ ಬಗ್ಗೆ ಗಹನವಾದ ಚರ್ಚೆ ನಡೆಸಿದರು. ಈ ಸಂಧರ್ಭದಲ್ಲಿ ಕಸಾಪ ಇದರ ಕೇಂದ್ರೀಯ ಮಾರ್ಗದರ್ಶಿ ಸಮಿತಿ ಸದಸ್ಯರಾದ ಡಾ.ಮುರಲಿ ಮೋಹನ್ ಚೂಂತಾರು ಮತ್ತು ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣ್ಕರ್ ಉಪಸ್ಥಿತರಿದ್ದರು.

Also Read  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ

error: Content is protected !!
Scroll to Top