ಚಲೋ ದೆಹಲಿ ಪ್ರತಿಭಟನೆ- ರಾಷ್ಟ್ರ ರಾಜಧಾನಿ ತಲುಪಿದ ಸಿಎಂ, ಡಿಸಿಎಂ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 07. ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಜಂತರ್‌ ಮಂತರ್‌‌ನಲ್ಲಿ ಹಮ್ಮಿಕೊಂಡಿರುವ “ನನ್ನ ತೆರಿಗೆ ನನ್ನ ಹಕ್ಕು ಚಲೋ ದೆಹಲಿ” ಪ್ರತಿಭಟನೆಯಲ್ಲಿ ಭಾಗವಹಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ಥರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುಧವಾರದಂದು ಬೆಳಗ್ಗೆ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಕನ್ನಡಿಗರ ನ್ಯಾಯಯುತ ತೆರಿಗೆಯ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಧೋರಣೆಯ ವಿರುದ್ಧ ಧ್ವನಿಯೆತ್ತೋಣ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾಗೂ ಸರ್ಕಾರದ ಎಲ್ಲಾ ಸಚಿವರು, ಕಾಂಗ್ರೆಸ್​ನ ಎಲ್ಲಾ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಗುರುವಾರದಂದು ಇದೇ ಜಾಗದಲ್ಲಿ ಕೇರಳ ಸರ್ಕಾರವು ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಇಂದು ದೆಹಲಿ ತಲುಪಿದ್ದಾರೆ. ತೆರಿಗೆ ಪಾಲು ಹಂಚಿಕೆ, ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರವು ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಮತ್ತು ಕೇರಳ ಸರ್ಕಾರ, ಈ ವಿಷಯವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿ ಪ್ರತಿಭಟನೆ ಆರಂಭಿಸಿವೆ.

Also Read  ಬೆಳ್ತಂಗಡಿ: ಕೇಂದ್ರ ಸರಕಾರದ ನೀತಿಯ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

error: Content is protected !!
Scroll to Top