ಬಂಟ್ವಾಳ: ಪಲ್ಟಿಯಾದ ಕಂಟೈನರ್ ತೆರೆದಾಗ ಪೊಲೀಸರಿಗೆ ಕಾದಿತ್ತು ಶಾಕಿಂಗ್ ನ್ಯೂಸ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಠಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ಕಂಟೈನರ್ ಲಾರಿಯೊಂದು ಸೋಮವಾರ ಬೆಳಿಗ್ಗೆ ಉರುಳಿ ಬಿದ್ದ ಪರಿಣಾಮ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.

ವಗ್ಗದ ಬಳಿಯ ಅಂಚಿಕಟ್ಟೆ ತಿರುವಿನಲ್ಲಿ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ಉರುಳಿ ಬಿದ್ದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಅದರ ಕಂಟೇನರ್ ತೆರೆದು ನೋಡಿದಾಗ ಅದರ ಒಳಗೆ ಅಕ್ರಮವಾಗಿ ದನ ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಅದರಲ್ಲಿದ್ದ 09 ಎತ್ತು ಮತ್ತು 05 ಎಮ್ಮೆಗಳನ್ನು ಹೊರತೆಗೆಯಲಾಗಿದ್ದು, ಅದರಲ್ಲಿದ್ದ ಒಂದು ಎತ್ತು ಸಾವನಪ್ಪಿದೆ. ಆರೋಪಿಗಳು ಪರಾರಿಯಾಗಿದ್ದು ಆರೊಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ. ಈ ಬಗ್ಗೆ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Also Read  ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ

error: Content is protected !!
Scroll to Top