ರೌಡಿ ಶೀಟರ್ ಆಕಾಶಭವನ ಶರಣ್ ಮೇಲೆ ಶೂಟೌಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 10. ರೌಡಿ ಶೀಟರ್ ಆಕಾಶಭವನ ಶರಣ್ ಎಂಬಾತನ ಮೇಲೆ ನಗರದ ಜಪ್ಪು ಕುಡ್ಪಾಡಿ ಬಳಿ ಇದೀಗ ಪೊಲೀಸರಿಂದ ಶೂಟೌಟ್ ನಡೆದಿರುವ ಕುರಿತು ವರದಿಯಾಗಿದೆ.


ನಗರದ ಮೇರಿಹಿಲ್ ಬಳಿ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರ ಮೇಲೆ ರೌಡಿಶೀಟರ್ ಆಕಾಶಭವನ ಶರಣ್, ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ಆರೋಪವಿದ್ದು, ಕೃತ್ಯ ಎಸಗಿದ ಬಳಿಕ ಆತ ತಲೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಜಪ್ಪು ಕುಡ್ಪಾಡಿ ಬಳಿ ಪೊಲೀಸರಿಂದ ಶೂಟೌಟ್ ನಡೆದಿದೆ ಎಂದು ತಿಳಿದು ಬಂದಿದೆ. ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸಹಿತ ಐದು ಮಂದಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶಭವನ ಶರಣ್ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆ ಪ್ರಕಟವಾಗಿರಲಿಲ್ಲ. ಉಳಿದ ಐದು ಮಂದಿ ಜೈಲು ಸೇರಿದ್ದರೆ, ರೌಡಿಶೀಟರ್ ಶರಣ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ಹಫ್ತಾ ಸಹಿತ 21 ಕೇಸುಗಳು ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನೊಂದಿದ್ದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ? ಇಲ್ಲಿದೆ ಸುಲಭ ಪರಿಹಾರ

error: Content is protected !!
Scroll to Top