ಕಡಬ: ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಬೆನ್ನಟ್ಟಿದ ಕಾಡಾನೆ – ಮೂವರು ರಬ್ಬರ್ ನಿಗಮದ ಕಾರ್ಮಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕೊಣಾಜೆ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳು ಬೆನ್ನಟ್ಟಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

ಗಾಯಗೊಂಡವರನ್ನು ರಬ್ಬರ್ ನಿಗಮದ ಟ್ಯಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ. ಭಯಭೀತರಾದ ಅವರು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

Also Read  ಮಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಗೃಹಸಚಿವ ಪರಮೇಶ್ವರ್ ಸೂಚನೆ

error: Content is protected !!
Scroll to Top