ಸೈಬರ್ ಕ್ರೈಂ- ಹೂಡಿಕೆ ಹೆಸರಿನಲ್ಲಿ ವಂಚನೆ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com, ಮಂಗಳೂರು, ನ. 25. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಿದ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಮಿಳುನಾಡಿನ ಕಣ್ಣನ್‌ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಇವರು ಅ. 03ರಂದು ಫೇಸ್‌ಬುಕ್‌ ಖಾತೆಗೆ ಬಂದಿದ್ದ ಲಿಂಕ್‌ ತೆರೆದು ನೋಡಿದಾಗ ಅದರಲ್ಲಿದ್ದ ಮಾಹಿತಿಯನ್ನು ನಂಬಿ ಟ್ರೇಡಿಂಗ್‌ ಖಾತೆ ತೆರೆದಿದ್ದರು. ಇದೀಗ ಅವರ ಖಾತೆಯಿಂದ ಮೂರು ಬಾರಿ ಹಣ ವರ್ಗಾಯಿಸಿಕೊಳ್ಳಲಾಗಿದ್ದು, ಆದರೆ ಯಾವುದೇ ಮೊತ್ತ ವಾಪಸ್‌ ನೀಡಿಲ್ಲ. ಈ ಕುರಿತು ಕಣ್ಣನ್‌ ಅವರು ಮಂಗಳೂರು ನಗರ ಸೈಬರ್‌ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Also Read  ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ

error: Content is protected !!
Scroll to Top