10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಪು, ಅ. 14. ಹತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ, ಕರೆ ತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಉದ್ಯಾವರ ಅಂಕುದ್ರು ನಿವಾಸಿ ಗಣೇಶ್‌ ಪೂಜಾರಿ (44) ಎಂದು ಗುರುತಿಸಲಾಗಿದೆ. ಆರೋಪಿಯು 2013 ಮತ್ತು 2014ರಲ್ಲಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ವಾರಂಟ್‌ ಮತ್ತು ಪ್ರೋಕ್ಲಮೇಷನ್‌ ಹೊರಡಿಸಲಾಗಿತ್ತು.

ಆರೋಪಿಯನ್ನು ಕಾಪು ಎಸ್ಐ ಅಬ್ದುಲ್‌ ಖಾದರ್‌ ಮತ್ತು ಕ್ರೈಂ ಎಸ್ಐ ಪುರುಷೋತ್ತಮ್‌ ಅವರ ಆದೇಶದಂತೆ ಕ್ರೈಂ ಸಿಬಂದಿ ನಾರಾಯಣ ಮತ್ತು ಗಣೇಶ್‌ ಶೆಟ್ಟಿ ಅ. 13ರಂದು ಮಹಾರಾಷ್ಟ್ರ ನಲಸೋಪರ್‌ ಈಸ್ಟ್‌ ಬಳಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Also Read    ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

error: Content is protected !!
Scroll to Top