ಇಸ್ರೇಲ್- ಪ್ಯಾಲೆಸ್ತೀನ್ ನಡುವೆ ಯುದ್ದ ; ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ನಲ್ಲಿ ಕುಳಿತ ಮಂಗಳೂರಿನ ಯುವಕ..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ನ ಹಮಾಸ್ ಉಗ್ರರು ದಾಳಿ ನಡೆಸುತ್ತಿರುವ ಹಿನ್ನೆಲೆ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಯುದ್ದ ಸಾರಿದೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಭಾರೀ ಕಾಳಗ ನಡೆಯುತ್ತಿದ್ದು, ಇಸ್ರೇಲ್ ನಾಗರಿಕರ ಗುರಿಯಾಗಿಸಿ ಹಮಾಸ್ ಉಗ್ರರು ರಾಕೇಟ್ ಉಡಾಯಿಸಿರುವುದಾಗಿ ವರದಿಯೊಂದು ತಿಳಿಸಿದೆ.

ಇಸ್ರೇಲ್ ಒಳಗೆ ಸಾವಿರಾರು ಹಮಾಸ್ ಉಗ್ರರು ನುಗ್ಗಿ ಗುಂಡಿನ ಸುರಿಮಳೆ ಗೈದಿದ್ದಾರೆ. ಕ್ಷಣ ಕ್ಷಣಕ್ಕೂ ಇಸ್ರೇಲ್‌ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಅಷ್ಟೇ ಅಲ್ಲದೇ ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯರಿಗೂ ಸಂಕಷ್ಟ ತಂದೊಡ್ಡಿದೆ. ಇನ್ನು ಉದ್ಯೋಗ ನಿಮಿತ್ತ ಇಸ್ರೇಲ್ ನಲ್ಲಿರುವ ಮಂಗಳೂರು ಹಾಗೂ ಉಡುಪಿಯ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 16 ವರ್ಷಗಳಿಂದ ಇಸ್ರೇಲ್ ನ ಟಲ್ ಅವೀವ್ ಎಂಬಲ್ಲಿ ನೆಲೆಸಿರುವ ಮಂಗಳೂರಿನ ಪ್ರವೀಣ್ ಪಿಂಟೋ ಎಂಬವರು ಸದ್ಯ ಕಷ್ಟದ ಪರಿಸ್ಥಿತಿಯಲ್ಲಿದ್ದು, ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ನಲ್ಲಿ ಸುರಕ್ಷಿತವಾಗಿರುವುದಾಗಿ ಪ್ರವೀಣ್ ಪಿಂಟೋ ತಮ್ಮ ಕುಟುಂಬಸ್ಥರಿಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಮಂಗಳೂರು ಹೊರವಲಯದ ದಾಬಸ್ ಕಟ್ಟೆ ಎಂಬಲ್ಲಿರುವ ಪ್ರವೀಣ್ ಪಿಂಟೋ ಕುಟುಂಬದಲ್ಲಿ ಆತಂಕ ಮೂಡಿದೆ.

Also Read  ಪುತ್ತೂರಿನ ವಿವಿಧೆಡೆ ಜನರೇಟರ್ ಬ್ಯಾಟರಿ ಕಳವು ಪ್ರಕರಣ ➤ ಆರೋಪಿ ಬಂಧನ

error: Content is protected !!
Scroll to Top