ರಾಜ್ಯೋತ್ಸವಕ್ಕೆ ಜಿಲ್ಲಾದ್ಯಂತ ಸಂಭ್ರಮದ ಸಿದ್ಧತೆ- ಡಾ.ಎಂ.ಪಿ.ಶ್ರೀನಾಥ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ ಅವರು ತಿಳಿಸಿದರು. ಅವರು ಉಪ್ಪಿನಂಗಡಿಯಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಕಾರ್ಯಕಾರಿಣಿಯಲ್ಲಿ ಕೈಗೊಂಡ ತೀರ್ಮಾನಗಳನ್ನು ವಿವರಿಸಿದರು. ದತ್ತಿನಿಧಿ ಕಾರ್ಯಕ್ರಮಗಳನ್ನು ಇನ್ನಷ್ಟು ಏರ್ಪಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಮುಂದುವರಿಸಿ 50 ಸಾವಿರ ಸದಸ್ಯತ್ವದ ಗುರಿ ಇಟ್ಟುಕೊಳ್ಳುವುದು, ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳೂರಿನಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದ ಅವರು ತಲಪಾಡಿಯಲ್ಲಿ ಜರುಗಿದ ಗಡಿನಾಡ ಕನ್ನಡ ಉತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು. ಸಭೆಯ ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಬಿ. ಐತಪ್ಪ ನಾಯ್ಕ್ ಸ್ವಾಗತಿಸಿದರು.

Also Read  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ➤ಜ್ಞಾನೋದಯ ಬೆಥನಿಗೆ 1 ಚಿನ್ನ , 1 ಬೆಳ್ಳಿ ಮತ್ತು 2 ಕಂಚು

ಕಾರ್ಯಕ್ರಮದಲ್ಲಿ ಕೇಂದ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಡಾ ಮಾಧವ ಎಂ.ಕೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಯು.ಎಚ್. ಖಾಲಿದ್ ಉಜಿರೆ, ಜಗದೀಶ ಎಡಪಾಡಿತ್ತಾಯ, ಪದಾಧಿಕಾರಿಗಳಾದ ಸುಂದರ ನಾಯ್ಕ, ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಲ್ಲತಡ್ಕ, ಸನತ್ ಕುಮಾರ್ ಜೈನ್, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಸೇಸಪ್ಪ ರೈ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ ನಾಯಕ್, ಬೆಳ್ತಂಗಡಿ ತಾಲೂಕು ಸಂಘಟನಾ ಸಹ ಕಾರ್ಯದರ್ಶಿ ಕಿರಣ ಪ್ರಸಾದ ರೈ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯದುಪತಿ ಗೌಡ, ಮುಲ್ಕಿ ತಾಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಿಥುನ ಕೊಡೆತ್ತೂರು ಉಪಸ್ಥಿತರಿದ್ದರು.

Also Read  ಇಂದು ಸಂಜೆ ಕಡಬದಲ್ಲಿ ದಿ| ಗೋಪಾಲರಾವ್ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

error: Content is protected !!
Scroll to Top