ಡ್ರೈವಿಂಗ್ ವೇಳೆ ಹೃದಯಾಘಾತ- ಲಾರಿ ಚಾಲಕ ಮೃತ್ಯು



(ನ್ಯೂಸ್ ಕಡಬ) newskadaba.com ಗುಂಡ್ಲುಪೇಟೆ, ಅ. 04. ಡ್ರೈವಿಂಗ್ ವೇಳೆ ಹೃದಯಾಘಾತವಾದ ಪರಿಣಾಮ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.








ಮೃತ ಚಾಲಕನನ್ನು ತಮಿಳುನಾಡು ಮೂಲದ ಸೆಲ್ವರಾಜ್ (50) ಎಂದು ಗುರಿತಿಸಲಾಗಿದೆ. ಇವರು ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ಹೃದಯಾಘಾತವಾಗಿತ್ತು. ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ, ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಗೂಡ್ಸ್ ಟೆಂಪೋಗೆ ಗುದ್ದಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top