ಕರ್ನಾಟಕ ಸೇರಿ ದೇಶದ 9 ರಾಜ್ಯಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ – ಪ್ರಧಾನಿಯಿಂದ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ ಹನ್ನೊಂದು ರಾಜ್ಯಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ 9 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿದರು.

ದೇಶದಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಕ್ರೇಝ್ ಹೆಚ್ಚುತ್ತಿದೆ ಮತ್ತು ಹೊಸ ರೈಲುಗಳು ದೇಶದ ಪ್ರತಿಯೊಂದು ಭಾಗವನ್ನು ಸಂಪರ್ಕಿಸುವ ಸಮಯದ ವಿಷಯವಾಗಿದೆ ಎಂದು ಪಿಎಂ ಮೋದಿ ಹೇಳಿದರು.

ಹೊಸ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ವೇಗವಾಗಿರುತ್ತವೆ ಮತ್ತು ಪ್ರಯಾಣಿಕರಿಗೆ ಸಾಕಷ್ಟು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ರೈಲ್ವೇ ಹೇಳಿದೆ.

Also Read  ಲಿಫ್ಟ್ ನಲ್ಲಿ ಸಿಲುಕಿ ಬಾಲಕನೋರ್ವ ಮೃತ್ಯು

ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ 160 ಕಿ.ಮೀ ಸಾಮರ್ಥ್ಯದ ಸ್ವಯಂ ಚಾಲಿತ ಎಲ್ಲಾ ಹವಾನಿಯಂತ್ರಿತ ಚೇರ್ ಕಾರ್ ರೈಲು. ಆದಾಗ್ಯೂ, ಭಾರತೀಯ ರೈಲ್ವೆಯ ಮಾರ್ಗಗಳಲ್ಲಿನ ವೇಗದ ನಿರ್ಬಂಧಗಳಿಂದಾಗಿ, ವಂದೇ ಭಾರತ್ ರೈಲುಗಳು 160 ಕಿ.ಮೀ ವೇಗದಲ್ಲಿ ಚಲಿಸುವುದಿಲ್ಲ. ಎಲ್ಲಾ 9 ಹೊಸ ವಂದೇ ಭಾರತ್ ರೈಲುಗಳು 8 ಬೋಗಿಗಳನ್ನು ಹೊಂದಿವೆ. ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಸಂಚರಿಸುವ ಮೊದಲ ಕಿತ್ತಳೆ ವಂದೇ ಭಾರತ್ ಎಕ್ಸ್ ಪ್ರೆಸ್ ಕೂಡಾ ಇದಾಗಿದೆ.

error: Content is protected !!
Scroll to Top