ಕೆ.ಸಿ.ರೋಡ್: ಹಾಡುಹಗಲೇ ಬ್ಯಾಂಕ್ ದರೋಡೆ ಯತ್ನ

ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ. ರೋಡ್ ಶಾಖೆಯ ಸಿಬ್ಬಂದಿಗಳಿಗೆ ಹಾಡುಹಗಲೇ ಚಾಕು ತೋರಿಸಿ ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರದಂದು ನಡೆದಿದೆ.

ಹೆಲ್ಮೆಟ್ ಧರಿಸಿಕೊಂಡು ಬ್ಯಾಂಕ್ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ದರೋಡೆಕೋರರು ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಗಳಿಗೆ ಚೂರಿ ತೋರಿಸಿ ಬೆದರಿಸಿ ಅವರನ್ನು ಶೌಚಾಲಯದೊಳಗೆ ಕೂಡಿ ಹಾಕಿ ಚಿನ್ನಾಭರಣವನ್ನು ದೋಚಲು ಯತ್ನಿಸಿದ್ದರು.

ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 20 ಕೆಜಿ ಚಿನ್ನವನ್ನು 50 ಕೆಜಿಯ ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭ ಶೌಚಾಲಯದಲ್ಲಿದ್ದ ಸಿಬ್ಬಂದಿಯೋರ್ವ ಪರಾರಿಯಾಗಲು ಯತ್ನಿಸುತ್ತಿದ್ದ ದರೋಡೆಕೋರರಿಗೆ ಕಲ್ಲು ಎಸೆದಿದ್ದು ಈ ಸಂದರ್ಭ ದರೋಡೆಕೋರರು ಚಿನ್ನ ತುಂಬಿಸಿದ್ದ ಗೋಣಿ ಚೀಲವನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ತಿಳಿದುಬಂದಿದೆ.

Also Read  ಬಂಟ್ವಾಳ: ದೇವರಾಜ್ ಅರಸ್ 109ನೇ ಜನ್ಮದಿನ ಆಚರಣೆ

ಸ್ಥಳಕ್ಕೆ ಡಿಸಿಪಿ ಹನುಮಂತರಾಯ, ಎಸಿಪಿ ಶೃತಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top