ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್‌ಗೆ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 22. ಇಲ್ಲಿನ  ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್‌ನ ಆಡಳಿತ ಸಮಿತಿಗೆ ಸೆ. 09ರಂದು ನಡೆದ ಚುನಾವಣೆಯಲ್ಲಿ 11 ಮಂದಿ ಸದಸ್ಯರು ಆಯ್ಕೆಯಾಗಿದ್ದರು.


ಸೆ. 21ರಂದು ಜಿಲ್ಲಾ ವಕ್ಫ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಯು.ಎಚ್., ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಕೆ., ಕೋಶಾಧಿಕಾರಿಯಾಗಿ ಅಬ್ದುಲ್ ನಾಸೀರ್ ಯು.ಎ. ಅವಿರೋಧವಾಗಿ ಆಯ್ಕೆಗೊಂಡರು. ಸದಸ್ಯರಾಗಿ ಇಸ್ಮಾಯಿಲ್ ಬಿ., ಹಮೀದ್ ಎಚ್.ಎಂ., ಹಸೈನಾರ್ ಬಿ., ಅಝರುದ್ದೀನ್ ಯು., ಹನೀಫ್ ಎನ್., ಹನೀಫ್ ಕೆಎಂ., ಅಬ್ದುಲ್ ಬಶೀರ್ ಆಯ್ಕೆಯಾದರು ಎಂದು ದ.ಕ.ಜಿಲ್ಲಾ ವಕ್ಫ್ ಅಧಿಕಾರಿಯೂ ಆಗಿರುವ ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್‌ನ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ಸೋನು ಸೂದ್..!

error: Content is protected !!
Scroll to Top