ಅಧಿಕ ಉಪ್ಪಿನ ಬಳಕೆಯಿಂದ ದೂರವಿರಿ- ಹೃದಯವನ್ನು ಕಾಪಾಡಿ

(ನ್ಯೂಸ್ ಕಡಬ) newskadaba.com ಸೆ. 22. ಆಹಾರದಲ್ಲಿ ಉಪ್ಪಿನ ಸೇವನೆ ಕಡಿಮೆ ಮಾಡುವುದಕ್ಕೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯು ವರದಿಯೊಂದನ್ನು ಬಿಡುಗಡೆ ಮಾಡಿದೆ. ಅಧಿಕ ಸೋಡಿಯಂ ಸೇವನೆ ಹಲವು ರೋಗಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಮಾನವನ ದೇಹಕ್ಕೆ ತೀರಾ ಅಗತ್ಯ ಪೌಷ್ಟಿಕಾಂಶವೆಂದೆನಿಸಿದ ಸೋಡಿಯಂ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಹೃದ್ರೋಗ, ಪಾರ್ಶ್ವ ವಾಯು, ಅವಧಿಪೂರ್ವ ಸಾವಿಗೂ ಕಾರಣವಾಬಹುದು.ಅಧಿಕ ಉಪ್ಪಿನ ಸೇವನೆ ರಕ್ತದ ಒತ್ತಡ ಹೆಚ್ಚಲು ಹಾಗೂ ಹೃದಯಾಘಾತ ಸಾಧ್ಯತೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಧಿಕ ಉಪ್ಪು ಸೇವನೆಯಿಂದ ದೂರವಿರುವುದೇ ಉತ್ತಮ.

ನಿಮ್ಮ ಆಹಾರದಲ್ಲಿ ಅಧಿಕ ಉಪ್ಪಿನ ಅಂಶವನ್ನು ಹೊಂದಿರುವ ಸಂಸ್ಕರಿತ, ಪೊಟ್ಟಣಗಳಲ್ಲಿ ತುಂಬಿದ ಮತ್ತು ಅನಾರೋಗ್ಯಕರ ಜಂಕ್‍ಫುಡ್ ಬಳಕೆ ಬೇಡ. ಇದರ ಬದಲು ಹಣ್ಣು, ತರಕಾರಿ ಮತ್ತು ಕಾಳುಗಳನ್ನು ಬಳಸಿ. ಹಾಗೆಯೇ ಸಾಸ್‍ ನ್ನು ಕಿತ್ತುಹಾಕಿ. ಕುಟುಂಬದ ಸದಸ್ಯರು ಹೆಚ್ಚು ಉಪ್ಪು ಬಳಸುವುದನ್ನು ಪ್ರೋತ್ಸಾಹಿಸಬೇಡಿ. ಉಪ್ಪಿನ ಬದಲು ಗಿಡಮೂಲಿಕೆ, ಸಾಂಬಾರ, ಬೆಳ್ಳುಳ್ಳಿ ಮತ್ತು ಹುಳಿಯ ಅಂಶವನ್ನು ಹೆಚ್ಚಾಗಿ ಸೇರಿಸಿ. ಉಪ್ಪು ಅಧಿಕ ಇರುವ ತಿನಸುಗಳಾದ ಆಲೂ ಚಿಪ್ಸ್, ಫ್ರೆಂಚ್ ಫ್ರೈ ಹಾಗೂ ಕ್ರ್ಯಾಕರ್‍ ಗಳ ಸೇವನೆ ಬೇಡ.

Also Read  16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

error: Content is protected !!
Scroll to Top