(ನ್ಯೂಸ್ ಕಡಬ) newskadaba.com ಲಕ್ನೋ, ಸೆ. 22. ಮಹಿಳಾ ಪೊಲೀಸ್ ಪೇದೆಯೊಬ್ಬರ ಮಾರಾಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೆಶದಲ್ಲಿ ನಡೆದಿದೆ.
ಹತ್ಯೆಗೊಳಗಾದವನನ್ನು ಅನೀಶ್ ಖಾನ್ ಎಂದು ಗುರುತಿಸಲಾಗಿದೆ. ಅಲ್ಲದೇ ಎನ್‌ಕೌಂಟರ್‌ನಲ್ಲಿ ಅನೀಸ್‌ನ ಇಬ್ಬರು ಸಹಚರರಾದ ಆಜಾದ್ ಮತ್ತು ವಿಷಂಭರ್ ದಯಾಲ್ ಕೂಡ ಗಾಯಗೊಂಡಿದ್ದಾರೆ. ಈ ಮೂವರು ಮಹಿಳಾ ಪೇದೆಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಸೊರಾನ್‌ನ ಭದ್ರಿ ಗ್ರಾಮದಲ್ಲಿ ನೆಲೆಸಿರುವ ಹೆಡ್ ಕಾನ್ಸ್ಟೇಬಲ್ ಸುಮಿತ್ರಾ ಪಟೇಲ್ ಎಂಬವರು ಆಗಸ್ಟ್ 30 ರಂದು ಕರ್ತವ್ಯಕ್ಕಾಗಿ ಅಯೋಧ್ಯೆಗೆ ಹೋಗಲು ಸರಯು ಎಕ್ಸ್ ಪ್ರೆಸ್ ರೈಲು ಹತ್ತಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.