ಯುವ ಯಕ್ಷಗಾನ ವೇಷಧಾರಿ ರಾಜೇಂದ್ರ ಗಾಣಿಗ ವಿಧಿವಶ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22. ಯಕ್ಷಗಾನ ಯುವ ವೇಷಧಾರಿ ಹೆರಂಜಾಲು ರಾಜೇಂದ್ರ ಗಾಣಿಗ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರದಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿದ್ದ ರಾಜೇಂದ್ರ ಗಾಣಿಗ ಅವರು, ಮಾರಣಕಟ್ಟೆ, ಹಾಲಾಡಿ, ಸೌಕೂರು ಹಾಗೂ ನೀಲಾವರ ಮೇಳಗಳಲ್ಲಿ ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಕಲಾ ಸೇವೆ ಮಾಡಿದ್ದರು. ಅವಿವಾಹಿತರಾಗಿದ್ದ ರಾಜೇಂದ್ರ ಗಾಣಿಗ ತಾಯಿ ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.

Also Read  ಶಾಲಾ-ಕಾಲೇಜು ದೋಚುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ     

error: Content is protected !!
Scroll to Top