ಉಪ್ಪಿನಂಗಡಿ: ಪೆಟ್ರೋಲ್ ಪಂಪ್ ನಲ್ಲಿ ಕಳ್ಳತನ- 30 ಸಾವಿರ ರೂ. ಕಳವು- ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 21. ಇಲ್ಲಿನ ನೆಕ್ಕಿಲಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ರೈಟ್ ಚಾಯ್ಸ್ ಪೆಟ್ರೋಲ್ ಪಂಪ್‌ನಲ್ಲಿ ಸೆ.16ರ ಮಧ್ಯರಾತ್ರಿಯ ವೇಳೆ ಕಳ್ಳತನವಾಗಿರುವ ಕುರಿತು ಸಿಸಿಟಿವಿ ದೃಶ್ಯದ ಮೂಲಕ ಬೆಳಕಿಗೆ ಬಂದಿದೆ.

ಕಳ್ಳನೋರ್ವ ಗ್ಲಾಸ್ ಡೋರ್‌ನ ಲಾಕ್ ಪುಡಿಗೈದು ಒಳಬಂದು ಕ್ಯಾಶ್ ಡ್ರಾವರ್‌ನಲ್ಲಿದ್ದ 30 ಸಾವಿರ ರೂ. ನಗದನ್ನು ಕಳವು ಮಾಡಿದ್ದು, ರೈನ್‌ಕೋಟ್, ಹೆಲ್ಮೆಟ್ ಧರಿಸಿ ಬಂದ ಕಳ್ಳ ಟಾರ್ಚ್ ಹಿಡಿದು ಕ್ಯಾಬಿನ್ ಜಾಲಾಡುವ ದೃಶ್ಯ ಸೆರೆಯಾಗಿದೆ. ಈ ಕುರಿತು ಪೆಟ್ರೋಲ್‌ ಬಂಕ್‌ ಮಾಲಕ ನವಾಝ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಚೇರಿಯ ಬಗ್ಗೆ ಮಾಹಿತಿಯಿರುವವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Also Read  ಸವಣೂರು: ಬಿಜೆಪಿ ಸಂಸ್ಥಾಪನ ದಿನಾಚರಣೆ

error: Content is protected !!
Scroll to Top