ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳು – ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. 2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.


ಡಿ.ಎಡ್ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆಯಡಿ ಸೆಪ್ಟೆಂಬರ್ 21 ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು.

ಎಂ.ಫಿಲ್ ಹಾಗೂ ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫೆಲ್ಲೋಶಿಪ್ ಯೋಜನೆಯಡಿ ಅಕ್ಟೋಬರ್ 03 ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://dom.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು.

ಅದೇ ರೀತಿ ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆ, ಶ್ರಮಶಕ್ತಿ (ವಿಶೇಷ ಮಹಿಳಾ) ಯೋಜನೆ, ಸಮುದಾಯ ಆಧಾರಿತ ತರಬೇತಿ (ಬ್ಯೂಟಿ ಪಾರ್ಲರ್, ವಾಹನ ಚಾಲನೆ, ಇತ್ಯಾದಿ) ಯೋಜನೆ, ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ (ಮಾಂಸದ ಅಂಗಡಿ, ವರ್ಕ್ ಶಾಪ್ ಇತ್ಯಾದಿ, ಶ್ರಮಶಕ್ತಿ (ಸಣ್ಣ ವ್ಯಾಪಾರ, ಕಸುಬು ಆಧಾರಿತ, ಇತ್ಯಾದಿ) ಯೋಜನೆ, ಸ್ವಾವಲಂಬಿ ಸಾರಥಿ (ಟ್ಯಾಕ್ಸಿ/ಗೂಡ್ಸ್ ಗಾಡಿ/ ಆಟೋರಿಕ್ಷಾ) ಯೋಜನೆಗಳಡಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://kmdconline.karnataka.gov.in ನಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಪಾರ್ಸಿ, ಬೌದ್ಧ ಸಮುದಾಯದವರು ಅರ್ಜಿ ಸಲ್ಲಿಸಬಹುದಾಗಿದೆ.

Also Read  ಎರ್ಮೆಟ್ಟಿ: ಬೆಂಕಿ ಬಿದ್ದು ಕೊಟ್ಟಿಗೆ ಸಂಪೂರ್ಣ ಭಸ್ಮ

error: Content is protected !!
Scroll to Top