ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ನೌಕರನಾಗಿ ಮಠದಲ್ಲಿ ಇರಲಾರೆ ► ಪೇಜಾವರ ಶ್ರೀ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.07. ಕೃಷ್ಣಮಠವನ್ನು ಸರಕಾರವು ಸ್ವಾಧೀನಪಡಿಸಿದರೆ ನಾನು ಸರಕಾರದ ನೌಕರನಾಗಿ ಮಠದಲ್ಲಿ ಇರಲಾರೆ. ನಾನು ಮಠದಿಂದ ಹೊರಬರುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಾಲಯ ಮತ್ತು ಮಠಗಳ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ದೇವಾಲಯ ಮತ್ತು ಮಠಗಳ ಸ್ವಾಧೀನಕ್ಕೆ ಕೈ ಹಾಕುವ ಮೂಲಕ ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ಆದರೆ ನಾನು ಇದರ ವಿರುದ್ಧ ಹೋರಾಟ ಮಾಡುವುದಿಲ್ಲ. ಈ ಹೋರಾಟವನ್ನು ಜನತೆಗೆ ಬಿಟ್ಟಿದ್ದೇನೆ. ಸರಕಾರ ಹಿಂದೂ ವಿರೋಧಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ. ಜಾತ್ಯಾತೀತ ಸರಕಾರ ಈ ರೀತಿ ನಡೆದುಕೊಳ್ಳಬಾರದು. ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು. ಆದರೆ ಸರಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Also Read  ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ- ಬಿಜೆಪಿ ಕಾರ್ಪೊರೇಟರ್ ಸಹೋದರನ ಬಂಧನ

ಇತ್ತೀಚೆಗೆ ಸರಕಾರ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ಕೈ ಬಿಡಲು ಮುಂದಾಗಿತ್ತು. ಮುಗ್ಧರಾದ ಎಲ್ಲರ ಮೇಲಿನ ಪ್ರಕರಣವನ್ನೂ ಸರಕಾರ ಕೈ ಬಿಡಲಿ, ಎಂದು ಸಲಹೆ ನೀಡಿದ ಅವರು, ಕೃಷ್ಣಮಠವನ್ನು ಸರಕಾರಕ್ಕೆ ಸ್ವಾಧೀನ ಪಡಿಸಿಕೊಳ್ಳುವ ವಿಚಾರ ಈವರೆಗೆ ಯಾವುದೇ ಮೂಲಗಳಿಂದ ಖಚಿತವಾಗಿಲ್ಲ ಎಂದಿದ್ದಾರೆ.

error: Content is protected !!
Scroll to Top