ಮಂಗಳೂರು: ಸೆ. 22ರಂದು ಹೋಬಳಿ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. 2023-24ನೇ ಸಾಲಿನ ಮಂಗಳೂರು ಪ್ರೌಢಶಾಲಾ ವಿಭಾಗದ ಹೋಬಳಿ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೆ. 22ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.


ಶಾಸಕರಾದ ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆಯ ಸದಸ್ಯರಾದ ಸುಮಂಗಲಾ ರಾವ್, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟೀನ್ಹೊ, ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ, ಇ.ಟಿ.ಎ ಶಿಪ್ಪಿಂಗ್ ಮತ್ತು ಲೋಜಿಸ್ಟಿಕ್ ಬಲ್ಲಾಲ್ ಭಾಗ್ ಪಾಲುದಾರರಾದ ಬಾಲಕೃಷ್ಣ ಜೆ ಕೊಟ್ಟಾರಿ ಭಾಗವಹಿಸಲಿದ್ದಾರೆ.

Also Read  ಪಿಎಂ ಸೂರ್ಯಘರ್ ಯೋಜನೆ ಕುಟುಂಬಗಳನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತದೆ ; ಸಂಸದ ಕ್ಯಾ.ಚೌಟ

ಮಂಗಳೂರು ಹೊಬಳಿಯ ವಿವಿಧ ಪ್ರೌಢಶಾಲೆಗಳ 17 ಹಾಗೂ 14ರ ವಯೋಮಿತಿಯ ಒಟ್ಟು 700 ಬಾಲಕರು ಮತ್ತು ಬಾಲಕಿಯರು ಭಾಗವಹಿಸಲಿದ್ದಾರೆ. ಅಂದು 100 ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಮತ್ತು ತಂಡದ ವ್ಯವಸ್ಥಾಪಕರಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಸೆ. 22ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top