ಬೆಳ್ಳಾರೆ: ಅಕ್ರಮ ಮರಳು ಅಡ್ಡೆಗೆ ದಾಳಿ ► ನಾಲ್ವರ ಬಂಧನ – 1 ಜೆಸಿಬಿ, 4 ಟಿಪ್ಪರ್ ವಶಕ್ಕೆ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.07. ಯಾವುದೇ ಪರವಾನಿಗೆ ಇಲ್ಲದೇ ಜೇಸಿಬಿ ಮೂಲಕ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದುದನ್ನು ಪತ್ತೆಹಚ್ಚಿರುವ ಬೆಳ್ಳಾರೆ ಪೊಲೀಸರು ಒಂದು ಜೇಸಿಬಿ, ನಾಲ್ಕು ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಅಮರ ಮೂಡ್ನೂರು ಗ್ರಾಮದ ಚಿಲ್ಪಾರ್ ಬಳಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಜೆಸಿಬಿ ಬಳಸಿ ನದಿಯಿಂದ ಟಿಪ್ಪರ್ ಲಾರಿಗಳಿಗೆ ಮರಳು ತುಂಬಿಸುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಸೊಣಂಗೇರಿ ನಿವಾಸಿ ಬೆಳಿಯಪ್ಪ ಎಂಬವರ ಪುತ್ರ ಮಹೇಶ್ (30), ಜಾರ್ಖಂಡ್ ಮೂಲದ ಇಸಾನ್ ಅನ್ಸಾರಿ ಎಂಬವರ ಪುತ್ರ ಅಝರ್(24), ಜಾಲ್ಸೂರು ಕೋನಡ್ಕ ಪದವು ನಿವಾಸಿ ಚಂದ್ರಶೇಖರ ನಾಯ್ಕ್ ಎಂಬವರ ಪುತ್ರ ಯಶೋಧರ ಹಾಗೂ ಮರ್ಕಂಜ ಕಟ್ಟಕೋಡಿ ನಿವಾಸಿ ಲಿಂಗಪ್ಪಗೌಡ ಎಂಬವರ ಪುತ್ರ ವಿತೇಶ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರಿಂದ‌ ಒಂದು ಜೆಸಿಬಿ, ನಾಲ್ಕು ಟಿಪ್ಪರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪ್ರಾಮಾಣಿಕ ದಕ್ಷ ನಿಷ್ಠಾವಂತರಿಗೆ ಎಲ್ಲೂ ಗೌರವವಿದೆ - ಸತೀಶ್ ಕೆ

error: Content is protected !!
Scroll to Top