ಸುಳ್ಯ: ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 17.ನಿಂತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕುಕ್ಕೆ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ಯಾಗ ಶಾಲೆ ಬಳಿ ನಡೆದಿದೆ.

ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕೆಂದು ಬಂದಿದ್ದ ಕುಟುಂಬವೊಂದು ಯಾಗಶಾಲೆಯ ಮುಂದೆ ಕಾರು ನಿಲ್ಲಿಸಿತ್ತು. ಸ್ವಲ್ಪ ಸಮಯದ ಬಳಿಕ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅದನ್ನು ನಂದಿಸಿ 30ಕ್ಕೂ ಹೆಚ್ಚು ವಾಹನಗಳು ಪಕ್ಕದಲ್ಲೇ ನಿಂತಿದ್ದರಿಂದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Also Read  ಜಿಲ್ಲಾದ್ಯಂತ ಇ-ಆಟೋ ಪರವಾನಗಿ ಹಿಂಪಡೆಯುವುದಿಲ್ಲ- ಡಿಸಿ ಮುಲ್ಲೈ ಮುಗಿಲನ್

error: Content is protected !!
Scroll to Top