ದಕ್ಷಿಣ ಕನ್ನಡ: ಪಾರ್ಟ್ ಟೈಂ ಕೆಲಸ ಕೊಡುವುದಾಗಿ 9.29 ಲಕ್ಷ ರೂ. ವಂಚನೆ – ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17. ಟೆಲಿಗ್ರಾಂ ನಲ್ಲಿ ಬಂದ ಆನ್‌ಲೈನ್‌ ಪಾರ್ಟ್‌ ಟೈಂ ಕೆಲಸದ ಸಂದೇಶವನ್ನು ನಂಬಿದ ವ್ಯಕ್ತಿಯೋರ್ವ 9,29,986 ರೂ. ಕಳೆದುಕೊಂಡಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರುದಾರರಿಗೆ ಯಾರೋ ಅಪರಿಚಿತ ಟೆಲಿಗ್ರಾಂ ಮೂಲಕ ಪಾರ್ಟ್‌ ಟೈಂ ಆನ್‌ಲೈನ್‌ ಕೆಲಸದ ಬಗ್ಗೆ ಸಂದೇಶ ಕಳುಹಿಸಿದ್ದನು. ಸಂದೇಶವನ್ನು ನಂಬಿದ ದೂರುದಾರ ಲಿಂಕ್‌ ಮೂಲಕ ಟಾಸ್ಕ್ ಪೂರ್ಣಗೊಳಿಸಿದ್ದಾರೆ. ಅದಕ್ಕೆ 10 ಸಾವಿರ ರೂ. ಬೋನಸ್‌ ಲಭಿಸಿದ್ದು, ಅದರಲ್ಲಿ 1,044 ರೂ.ಗಳನ್ನು ತಮ್ಮ ಖಾತೆಗೆ ಹಿಂಪಡೆದಿದ್ದಾರೆ. ಅನಂತರ ಹೆಚ್ಚಿನ ಕಮಿಷನ್‌ ಆಸೆಯಿಂದ ಮುಂದಿನ ಟಾಸ್ಕ್ ಪೂರ್ಣಗೊಳಿಸಲು 10 ಸಾವಿರ ರೂ. ಡೆಪಾಸಿಟ್‌ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಆಟವಾಡಿ 53,848 ರೂ. ತಮ್ಮ ಖಾತೆಗೆ ವಿದ್‌ಡ್ರಾ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಹೆಚ್ಚು ಕಮಿಷನ್‌ ಗಳಿಸಬಹುದು ಎನ್ನುವ ಆಸೆಯಿಂದ ಟಾಸ್ಕ್ ಗಾಗಿ ತಮ್ಮ ವಿವಿಧ ಖಾತೆಯಿಂದ 9.29 ಲಕ್ಷ ರೂ. ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅನಂತರ ಯಾವುದೇ ಟಾಸ್ಕ್ ನೀಡದೇ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Also Read  ಕೊಕ್ಕಡ: ಕಾರು - ಬಸ್ ಢಿಕ್ಕಿ ► ಇಬ್ಬರು ಮೃತ್ಯು

error: Content is protected !!
Scroll to Top