ಕುಟುಂಬಸ್ಥರು ಯಾರೂ ಬಾರದ ಹಿನ್ನೆಲೆ – ಪೊಲೀಸ್ ಹಾಗೂ ಸ್ಥಳೀಯಾಡಳಿತದಿಂದ ಕಾರ್ಮಿಕನ ಅಂತ್ಯಸಂಸ್ಕಾರ..!

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 17. ವಾರದ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಹೊಟೇಲ್‌ ಕಾರ್ಮಿಕನ ಮೃತದೇಹವನ್ನು ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೊಲೀಸರು, ಸ್ಥಳೀಯಾಡಳಿತ ನೆರವಿನೊಂದಿಗೆ ಅಂತ್ಯಸಂಸ್ಕಾರ ನಡೆಸಿದ ಕುರಿತು ವರದಿಯಾಗಿದೆ.

ಇಲ್ಲಿನ ರಥಬೀದಿಯಲ್ಲಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಶ್ರೀಲೂಲು ಎಂಬವರು ಕಳೆದ ವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತದೇಹವನ್ನು ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಿ, ವ್ಯಕ್ತಿಯ ಸಂಬಂಧಿಕರು ಇದ್ದಲ್ಲಿ ಸುಳ್ಯ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ನೀಡಲಾಗಿತ್ತು. ಆದರೆ ಕುಟುಂಬಸ್ಥರು ಯಾರೂ ಬಾರದ ಹಿನ್ನೆಲೆ ಮೃತ ದೇಹವನ್ನು ಸುಳ್ಯ ಕೇರ್ಪಳದ ರುದ್ರ ಭೂಮಿಯಲ್ಲಿ ಪೊಲೀಸ್‌ ಇಲಾಖೆ ಮತ್ತು ಸುಳ್ಯ ನಗರ ಪಂಚಾಯತ್‌ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಿಂದ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ಸಂದರ್ಭ ಸುಳ್ಯ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕಿ ಸರಸ್ವತಿ, ಪೊಲೀಸ್‌ ಸಿಬಂದಿ ಹಾಗೂ ನಗರ ಪಂಚಾಯತ್‌ ಸಿಬಂದಿ ಉಪಸ್ಥಿತರಿದ್ದರು.

Also Read  ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ

error: Content is protected !!
Scroll to Top