ಮಹಿಳೆಗೆ ಹಲ್ಲೆಗೈದು ಸರ ಅಪಹರಣ

(ನ್ಯೂಸ್ ಕಡಬ) newskadaba.com ಸಾಗರ, ಸೆ. 15. ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಗೆ ಹಲ್ಲೆ ಮಾಡಿ ಮಾಂಗಲ್ಯ ಸರ ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ವಿನೋಬ ನಗರದಲ್ಲಿ ಶುಕ್ರವಾರದಂದು ನಡೆದಿದೆ.


ಸಂತ್ರಸ್ತ ಮಹಿಳೆ ವಿಜಯಮ್ಮ ಎಂಬವರು ಅಂಗಡಿಯಿಂದ ಹಿಂದುರುಗುತ್ತಿದ್ದ ಸಂದರ್ಭ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಮಹಿಳೆಯ ಪ್ರಕಾರ ಬೈಕಿನಿಂದ ಇಳಿದು ಬಂದ ಒಬ್ಬಾತ ಮುಖಕ್ಕೆ ಹೊಡೆದು ಮಾಂಗಲ್ಯ ಸರ ಎಳೆದಿದ್ದಾನೆ. ಆದರೆ ನಾನು ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ 40 ಗ್ರಾಂ ಇದ್ದ ಸರದಲ್ಲಿ ಅಂದಾಜು 8 ಗ್ರಾಂ ನಷ್ಟು ತುಂಡಾಗಿ ಹೋಗಿದೆ ಎಂದು ತಿಳಿಸಿದ್ದಾರೆ.

Scroll to Top