ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜನನ ಸರ್ಟಿಫಿಕೇಟ್ ಕಡ್ಡಾಯ..!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 15. ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿ ಮೊದಲಾದ ಸೇವೆಗಳನ್ನು ಪಡೆಯಲು ಅಕ್ಟೋಬರ್ 1ರಿಂದ, ಜನನ ಪ್ರಮಾಣಪತ್ರ ಕಡ್ಡಾಯ ದಾಖಲೆಯಾಗಿರುತ್ತದೆ ಎಂದು ಜನನ ಮತ್ತು ಮರಣಗಳ ನೋಂದಣಿ ಕಾಯಿದೆ 2023ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.

ಜನನ ಪ್ರಮಾಣಪತ್ರ ಪಡೆಯುವುದರಿಂದ ಜನನ ಮತ್ತು ಮರಣಗಳ ಡೇಟಾ ಬೇಸ್ ರಚನೆಗೆ ಸಹಾಯವಾಗುತ್ತದೆ ಮತ್ತು ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಹಾಗೂ ಡಿಜಿಟಲ್ ನೋಂದಣಿಯ ಪಾರದರ್ಶಕವಾದ ದಾಖಲೆಗಳನ್ನು ನೀಡುವ ಸಲುವಾಗಿ ಈ ಕ್ರಮವನ್ನು ತರಲಾಗಿದೆ.

Also Read  ಕಾರವಾರ :ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಭಾರತೀಯ ನೌಕಾಪಡೆ ಕ್ಯಾಪ್ಟನ್ ಮೃತ್ಯು

error: Content is protected !!
Scroll to Top