ಶೀಘ್ರದಲ್ಲೇ ಡೀಸೆಲ್ ವಾಹನಗಳಿಗೆ ವಿದಾಯ ಹೇಳಿ – ಕಾರು ತಯಾರಕರಿಗೆ ನಿತಿನ್ ಗಡ್ಕರಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ. 13. ಭಾರತೀಯ ಕಾರು ಉತ್ಪಾದಕರಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, “ಡೀಸೆಲ್ ಗೆ ವಿದಾಯ ಹೇಳಿ… ದಯವಿಟ್ಟು ಅವುಗಳನ್ನು ತಯಾರಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲು ಕಷ್ಟವಾಗುವಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ” ಎಂದು ಹೊಸದಿಲ್ಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.

2070 ರ ವೇಳೆಗೆ ಕಾರ್ಬನ್ ನೆಟ್ ಝೀರೊ ಸಾಧಿಸುವುದು ಹಾಗೂ ಡೀಸೆಲ್ ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವುದು ನಮ್ಮ ಬದ್ದತೆಯಾಗಿದೆ ಎಂದು ಎಂದು ಗಡ್ಕರಿ ಹೇಳಿದ್ದಾರೆ. ಪ್ರಸ್ತುತ, ಆಟೋಮೊಬೈಲ್ ಗಳಿಗೆ ಹೆಚ್ಚುವರಿ ಸೆಸ್ ನೊಂದಿಗೆ 28 ಶೇ. ಜಿಎಸ್ಟಿ ವಿಧಿಸಲಾಗುತ್ತಿದೆ.

Also Read  ಉದ್ಯೋಗ ಮಾಹಿತಿ | ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು

error: Content is protected !!