ಲಂಚ ಸ್ವೀಕಾರ ಪ್ರಕರಣ – ಬಂಧನಕ್ಕೊಳಗಾಗಿದ್ದ ಗ್ರಾಮ ಆಡಳಿತಾಧಿಕಾರಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಸುಳ್ಯ, ಆ. 30. ಸುಳ್ಯದ ಕಂದಾಯ ಇಲಾಖೆಯ ಕಭೇರಿಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಲಂಚ ಸ್ವೀಕರಿಸಿ ಬಂಧನಕ್ಕೊಳಗಾದ ಗ್ರಾಮ ಆಡಳಿತ ಅಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಇಂದು ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ. ‌


ಅರಂತೋಡು ಗ್ರಾಮದ ವ್ಯಕ್ತಿಯೋರ್ವರು ನೀಡಿದ ದೂರಿನಂತೆ ಆ. 19 ರಂದು ಲೋಕಾಯುಕ್ತ ಪೋಲೀಸರ ದಾಳಿ ವೇಳೆ 5000 ರೂ. ಲಂಚ ಸ್ವೀಕರಿಸುತ್ತಿದ್ದ ಮಿಯಾಸಾಬ್ ಮುಲ್ಲಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

Also Read  ಕರಾವಳಿಯಲ್ಲಿ ಹಾಡುಹಗಲೇ ವ್ಯಕ್ತಿಯ ಇರಿದು ಬರ್ಬರ ಕೊಲೆ ► ಪಬ್ ಗೆ ನುಗ್ಗಿದ ತಂಡದಿಂದ ನಡೆಯಿತು ಕೃತ್ಯ

error: Content is protected !!
Scroll to Top