ಲಂಚ ಪಡೆದ ಆರೋಪ- ಇಡಿ ಅಧಿಕಾರಿ ಸಿಬಿಐ ಬಲೆಗೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 29. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ಕೋಟಿ ರೂ, ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಇಡಿ ಅಧಿಕಾರಿಯನ್ನು ಸಿಬಿಐ ಬಂಧಿಸಿರುವ ಕುರಿತು ವರದಿಯಾಗಿದೆ.


ಅಬಕಾರಿ ನೀತಿ ಪ್ರಕರಣದ ಆರೋಪಿ ಅಮನ್‌ದೀಪ್ ಸಿಂಗ್ ಧಲ್ ಅವರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಇಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ ಎಂಬ ಅಧಿಕಾರಿಯನ್ನು ಬಂಧಿಸಿ, ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಪವನ್ ಖತ್ರಿ ಮತ್ತು ಕ್ಲರ್ಕ್ ನಿತೇಶ್ ಕೊಹರ್ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿದೆ.

Also Read  16 ವರ್ಷದ ಬಾಲಕಿಯ ಅಪಹರಿಸಿ ರೇಪ್ - ಆರೋಪಿ 15 ವರ್ಷದ ಬಾಲಕ ವಶಕ್ಕೆ !!

error: Content is protected !!
Scroll to Top