(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.07. ತನಗೆ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ ಮೊಬೈಲೊಂದನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಶಾಲಾ ವಿದ್ಯಾರ್ಥಿಯೋರ್ವ ಪ್ರಾಮಾಣಿಕತೆ ಮೆರೆದಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಕೊಂಬೆಟ್ಟು ಸಂಯುಕ್ತ ಪದವಿ ಪೂರ್ವ ಕಾಲೇಜಿನ 9 ನೇ ತರಗತಿ ವಿದ್ಯಾರ್ಥಿ, ಮುಕ್ವೆ ನರಿಮೊಗರು ನಿವಾಸಿ ಇಬ್ರಾಹಿಂ ಬಾತಿಷ್ ಇದೀಗ ಸಾರ್ವಜನಿಕ ಪ್ರಶಂಸೆಗೆ ಒಳಗಾದಾತ. ತನಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್ ಫೋನನ್ನು ವಾರಸುದಾರರಿಗೆ ಹಸ್ತಾಂತರಿಸುವ ಸಲುವಾಗಿ ನೇರವಾಗಿ ಪುತ್ತೂರು ನಗರ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದು, ಪೊಲೀಸರು ಆತನನ್ನು ಅಭಿನಂದಿಸಿದ್ದಾರೆ.