ಡೇಟಿಂಗ್ ಆ್ಯಪ್ ಮೂಲಕ ಹುಡುಗಿ ಹೆಸರಿನಲ್ಲಿ ವಂಚನೆ – ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಆನ್ ಲೈನ್ ಡೇಟಿಂಗ್ ಆ್ಯಪ್ ಮೂಲಕ ಸುಲಿಗೆ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.


ಬಂಧಿತರನ್ನು ನದೀಂ ಪಾಷ ಹಾಗೂ ನಾಗೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಲೊಕ್ಯಾಂಟೋ ಎಂಬ ಆ್ಯಪ್ ಮೂಲಕ ಹುಡುಗಿಯರ ಹೆಸರಿನಲ್ಲಿ ಕರೆ ಮಾಡಿ ಡೇಟಿಂಗ್ ನೆಪದಲ್ಲಿ ಕರೆಸಿ ಬಳಿಕ ಹಣ ದೋಚಿ ವಂಚಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರು ಲೊಕ್ಯಾಂಟೋ ಆ್ಯಪ್ ಬಳಸುವವರನ್ನೇ ಟಾರ್ಗೆಟ್ ಮಾಡಿ, ಮೊದಲು ಅಪರಿಚಿತ ಯುವತಿಯರ ಫೋಟೋ ಹಾಕಿ ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ, ಬಳಿಕ ಮೆಸೇಜ್ ಮಾಡಿ ಸಲುಗೆಯಿಂದ ಮಾತಾಡುತ್ತಿದ್ದರು. ಹುಡುಗ ಮಾತಿಗೆ ಮರುಳಾದ ಅಂತ ತಿಳಿಯುತ್ತಿದ್ದಂತೆ ಲೊಕೇಷನ್ ಕೊಟ್ಟು ಕರೆಸಿಕೊಳ್ಳುತ್ತಿದ್ದರು.

Also Read  ಕ್ಷುಲ್ಲಕ ಕಾರಣಕ್ಕೆ 7 ತಿಂಗಳ ಗರ್ಭಿಣಿಯ ಕೊಂದ ಪಾಪಿಗಳು..!


ಇತ್ತ ಮೋಸದ ಅರಿವಿರದ ಯುವಕ ಯುವತಿ ಕಳಿಸಿದ ಲೊಕೇಷನ್​ಗೆ ಬರುತ್ತಿದ್ದಂತೆ ಲೋಕ್ಯಾಂಟೋ ಆ್ಯಪ್ ಸಂಪರ್ಕಿತ ವ್ಯಕ್ತಿ ಇವನೇ ಎಂದು ತಿಳಿದುಕೊಂಡು ಬಳಿಕ ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ, ಚಿನ್ನಾಭರಣ ಸುಲಿಗೆ ಮಾಡಿ, ಅಕೌಂಟ್​ನಿಂದಲೂ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಸ್ನೇಹಿತರಿಗೂ ಕರೆ ಮಾಡಿ ಗೂಗಲ್ ಪೇ, ಫೋನ್ ಪೇ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೇ ರಾತ್ರಿಯಿಡೀ ಬಂಧನದಲ್ಲಿರಿಸಿ ಬೆಲೆಬಾಳುವ ವಸ್ತುಗಳ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ರೀತಿ ಸುಮಾರು 15ಕ್ಕೂ ಅಧಿಕ ಜನರಿಗೆ ಮೆಸೇಜ್ ಮಾಡಿ ಕರೆಸಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹೆಚ್​ಎಸ್​ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಈ ರೀತಿಯ ಕೃತ್ಯ ಎಸಗಿದ್ದು, ವ್ಯಕ್ತಿಯೊಬ್ಬನಿಂದ 60 ಸಾವಿರ ಹಣ ಸುಲಿಗೆ ಮಾಡಿದ್ದರು. ಇದರಿಂದ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಪತ್ರಕರ್ತರಿಗೆ ಆಹ್ವಾನ

error: Content is protected !!
Scroll to Top