ಸಣ್ಣ ಎಲ್ಇಡಿ ಬಲ್ಬ್ ನುಂಗಿದ ಒಂಬತ್ತು ತಿಂಗಳ ಮಗು

(ನ್ಯೂಸ್ ಕಡಬ) newskadaba.com ಅಹ್ಮದಾಬಾದ್‌, ಆ. 27. 9 ತಿಂಗಳ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ಇಡಿ ಬಲ್ಬ್​ ನುಂಗಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಾ, ಅದರ ಆಂಟೆನಾದಲ್ಲಿರುವ ಎಲ್​ಇಡಿ ಬಲ್ಬ್​ ಅನ್ನು ಬಾಯಿಗೆ ಹಾಕಿಕೊಂಡಿತ್ತು. ನಂತರ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿ, ಆಗ ಪೋಷಕರು ಮಗುವಿಗೆ ಏನೋ ಆಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಕ್ಷಣವೇ ವೈದ್ಯರು ಮಗುವನ್ನು ಎಕ್ಸ್ ರೇ ಮಾಡಿದ್ದು, ಮಗು ಎಲ್​ಇಡಿ ಬಲ್ಬ್​ ನುಂಗಿರುವುದು ಎಕ್ಸ್​ ರೇ ಸಂದರ್ಭ ಶ್ವಾಸಕೋಶದಲ್ಲಿ ಆ ವಸ್ತು ಪತ್ತೆಯಾಗಿತ್ತು. ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಗುವಿನ ಶ್ವಾಸಕೋಶದಲ್ಲಿನ ಬಲ್ಬ್​ ಅನ್ನು ಹೊರ ತೆಗೆದಿದ್ದಾರೆ ಎನ್ನಲಾಗಿದೆ.

Also Read  ಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾದಿಂದ ಅನುಮತಿ

error: Content is protected !!
Scroll to Top