ಅಮೇರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬಂಧನ- ಬಿಡುಗಡೆ

(ನ್ಯೂಸ್ ಕಡಬ) newskadaba.com ಅಮೇರಿಕಾ, ಆ. 25. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ಟ್ರಂಪ್ ಟವರು ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ವರದಿಯಾಗಿದೆ.


2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ, ಪಿತೂರಿ, ವಂಚನೆ ಯತ್ನ ಆರೋಪ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್​ರನ್ನು​​​​​​ ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದರು. ಆದರೆ $200,000 ಬಾಂಡ್‌ನ ಇರಿಸಿ 20 ನಿಮಿಷಗಳ ಬಳಿಕ ಜಾಮೀನು ಪಡೆದು ಟ್ರಂಪ್ ಹೊರಬಂದಿದ್ದಾರೆ.

Also Read  ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ

error: Content is protected !!
Scroll to Top