(ನ್ಯೂಸ್ ಕಡಬ) newskadaba.com ಆ. 23. ಹಿಂದೂ ಧರ್ಮದಲ್ಲಿನ 18 ಪುರಾಣಗಳ ಪೈಕಿ ಗರುಡ ಪುರಾಣದಲ್ಲಿ ಜೀವನದ ಅನೇಕ ವಿಷಯಗಳನ್ನು ಬರೆಯಲಾಗಿದ್ದು, ಅದನ್ನು ಜೀವನದಲ್ಲಿ ಅನುಸರಿಸಿಕೊಂಡು ಹೋದಲ್ಲಿ ಮನೆಯಲ್ಲಿ ಸಮೃದ್ಧಿ ನೆಲೆಯಾಗುತ್ತದೆ. ಅಲ್ಲದೇ ಅವುಗಳಲ್ಲಿ ಕೆಲವು ಅಭ್ಯಾಸಗಳನ್ನು ದೂರವಿಡುವಂತೆಯೂ ಸಲಹೆ ನೀಡಲಾಗಿದೆ.
ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಬೆಳಗ್ಗೆ ತಡವಾಗಿ ಏಳುವುದರಿಂದ ಆಯಸ್ಸು ಕಡಿಮೆಯಾಗುತ್ತದಂತೆ. ಗರುಡ ಪುರಾಣ ಪ್ರಕಾರ ವಾಸ್ತವದಲ್ಲಿ ಬೆಳಗ್ಗೆ ಗಾಳಿಯು ಶುದ್ಧವಾಗಿರುತ್ತದೆ. ಅದು ಹಲವು ರೋಗಗಳನ್ನು ಗುಣಪಡಿಸುತ್ತದೆ. ಹಾಗೆಯೇ ಬೆಳಗ್ಗೆ ದೈಹಿಕ ಸಂಬಂಧವೇರ್ಪಡಬಾರದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಪುರಾಣದ ಪ್ರಕಾರ ಮೊಸರು ತಂಪು ಗುಣ ಹೊಂದಿರುವುದರಿಂದ ಅದನ್ನು ರಾತ್ರಿಯಲ್ಲಿ ಸೇವಿಸುವುದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.
ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ. ಇದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ. ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿ ಕಾಯಿಲೆಗಳಿಗೆ ಕಾರಣವಾಗಬಹುದು.