ಜಾನುವಾರು ಕಳ್ಳತನ- ಇಬ್ಬರ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಆ.‌ 20. ದನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಜ್ಪೆ ಠಾಣಾ ವ್ಯಾಪ್ತಿಯ ಬಡಗ ಎಡಪದವು ದಡ್ಡಿ ಎಂಬಲ್ಲಿ ಬಂಧಿಸಿದ್ದಾರೆ.








ಬಂಧಿತರನ್ನು ಉಳ್ಳಾಲದ ಮಲಾರ್, ಪಾವೂರು ಗ್ರಾಮದ ಬದ್ರಿಯಾ ನಗರದ ನಿವಾಸಿ ಇರ್ಫಾನ್ (30) ಮತ್ತು ಬಂಟ್ವಾಳದ ಸಿದ್ದಕಟ್ಟೆ ಗ್ರಾಮದ ಸಂಗಬೆಟ್ಟು ಗ್ರಾಮದ ಮೊಹಮ್ಮದ್ ಆರಿಫ್ ಅಲಿಯಾಸ್ ಪುಚ್ಚೇರಿ ಆರಿಫ್ (32) ಎಂದು ಗುರುತಿಸಲಾಗಿದೆ. ಆ. 14ರಂದು ರಾತ್ರಿ ಬಡಗ ಎಡಪದವು ಎಂಬಲ್ಲಿ ಮೂರು ಹಸುಗಳನ್ನು ಕಳವು ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಶನಿವಾರದಂದು ಬಂಧಿಸಿ, ಆರೋಪಿಗಳಿಂದ ಐದು ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.






error: Content is protected !!
Scroll to Top