ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯ – ಕೆಮ್ಮಾರ ಸರಕಾರಿ ಶಾಲಾ ಬಾಲಕಿಯರ ತಂಡ ದ್ವಿತೀಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 19. 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವು ಇಲ್ಲಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.


ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಟಗಾರ್ತಿಯರಾದ ಜಮೀಲತ್ ನೌಶೀನ, ಜೋಯ, ಝೈನಬ ವಫಿಯ್ಯ ತಂಡವನ್ನು ಪ್ರತಿನಿಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ, ಶ್ರೀಮತಿ ಮೆಹನಾಝ್, ಜುನೈದ್ ಕೆಮ್ಮಾರ, ಸಿಆರ್‌ಪಿಎಂ ಯೋಧ ಝುಬೈರ್ ಹಳೆನೇರೆಂಕಿ, ಅಜೀಜ್.ಜಿ ಅವರು ತರಬೇತಿ ನೀಡಿದ್ದರು.

Also Read  ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲಾ ಮಂತ್ರಿಮಂಡಲ

error: Content is protected !!
Scroll to Top