ಬಿಗ್ ಬಾಸ್ ಕನ್ನಡ ಸೀಸನ್- 10 – ಸ್ಪರ್ಧಿಗಳ ಪಟ್ಟಿ ವೈರಲ್

(ನ್ಯೂಸ್ ಕಡಬ) newskadaba.com ಆ. 19. ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ಕೆಲವು ಅಪ್‌ಡೇಟ್‌ಗಳು ವೈರಲ್‌ ಆಗುತ್ತಿದ್ದು, ಕಳೆದ ಬಾರಿಯಂತೆ ಈ ಸಲವೂ ಬಿಗ್‌ಬಾಸ್‌ ಓಟಿಟಿ ನಡೆಯುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಬಿಗ್ ಬಾಸ್ ಶೋ ನೇರವಾಗಿ ಟಿವಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಎಂದಿನಂತೆ ಈ ವರ್ಷವೂ ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಸೀಸನ್‌ 10 ಸಪ್ಟೆಂಬರ್‌ನಲ್ಲಿ ಆರಂಭಗೊಳ್ಳುವ ಮಾಹಿತಿ ಕೇಳಿಬರುತ್ತಿದೆ. ಇದೇ ಕಾರಣಕ್ಕಾಗಿ ಸ್ಪರ್ಧಿಗಳ ಲಿಸ್ಟ್‌ ವೈರಲ್‌ ಆಗದೆ. ಯಾರೆಲ್ಲ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ ಎಂಬ ಚರ್ಚೆಯೂ ಬಹಳ ಜೋರಾಗಿ ನಡೆದಿದೆ. ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಬಿಗ್‌ಬಾಸ್‌ ಶುರುವಾಗುವ ಸಾಧ್ಯತೆ ಇದೆ.

Also Read  ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ: 50 ಮಂದಿ ವಶಕ್ಕೆ

ಸೀಸನ್ 10ರಲ್ಲಿ ನಾಗಿಣಿ ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌ ಮತ್ತು ವರ್ಷ ಕಾವೇರಿ, ನಟಿ ರೇಖಾ, ಕಿರುತೆರೆ ನಟ ರಾಜೇಶ್‌ ಧ್ರುವ, ಶನಿ ಸೀರಿಯಲ್‌ ಖ್ಯಾತಿಯ ಸುನೀಲ್‌ ಅವರ ಹೆಸರು ಈಗಾಗಲೇ ವೈರಲ್‌ ಆಗುತ್ತಿದೆ. ದೊಡ್ಮನೆಗೆ ಆಗಮಿಸುವ 15 ಕಲಾವಿದರ ಪೈಕಿ ಐವರ ಹೆಸರು ಜೋರಾಗಿ ಹರಿದಾಡುತ್ತಿದೆ. ವಾರಕ್ಕೊಂದು ಎಲಿಮಿನೇಷನ್‌ ಜೊತೆ ಮೈ ನವಿರೇಳಿಸುವ ಟಾಸ್ಕ್‌ಗಳನ್ನು ನೋಡಲು ಜನ ಕಾತುರದಿಂದ ಕಾದು ಕುಳಿತಿದ್ದಾರೆ. ಒಟ್ಟಾರೆ ಶೀಘ್ರದಲ್ಲೇ ಕನ್ನಡ ಬಿಗ್‌ ಬಾಸ್‌ ಸೀಸನ್ 10 ಶುರುವಾಗಲಿದ್ದು, ಜನರಿಗೆ ಮನರಂಜನೆ ನೀಡಲಿದೆ.

Also Read  ಕಂಬಳದ ಶ್ರೀನಿವಾಸ ಗೌಡರಿಗೆ ಮುಖ್ಯಮಂತ್ರಿಯಿಂದ ಸನ್ಮಾನ

error: Content is protected !!
Scroll to Top