(ನ್ಯೂಸ್ ಕಡಬ) newskadaba.com ವಿಟ್ಲ, ಫೆ.04. ಠಾಣಾ ವ್ಯಾಪ್ತಿಯ ಕರೊಪಾಡಿ ಗ್ರಾಮದ ಆನೇಕಲ್ಲು ಎಂಬಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಗಳನ್ನು ಬಂಧಿಸಿ 6250/- ರೂ, ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಟ್ಲ ಠಾಣಾ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜೇಶ್ವರ ನಿವಾಸಿ ಜಿತೇಂದ್ರ(23), ಸಾಲೆತ್ತೂರು ನಿವಾಸಿ ಹ್ಯಾರಿಸ್ (25), ದೇರಳಕಟ್ಟೆ ನಿವಾಸಿ ಅಬ್ಬಾಸ್(48) ಹಾಗೂ ಮಂಜೇಶ್ವರ ನಿವಾಸಿ ವಿಶ್ವನಾಥ(58) ಎಂಬ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.