’ಪಬ್ ಜಿ’ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಲಬುರಗಿ, ಆ.07. ಇಲ್ಲೊಬ್ಬ ವಿದ್ಯಾರ್ಥಿ ಆನ್ಲೈ್ನ್‍ ಗೇಮ್ಗೆಳಲ್ಲಿ ಲೀನನಾಗಿ ಹಣ ಕಟ್ಟಿ ಪಬ್ಜಿ್ ಆಟವಾಡುತ್ತಿದ್ದ. ಕೊನೆಗೆ ಈತ ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೂಲತಃ ಬೆಟ್ಟಿಂಗ್‍ ಆಟವಲ್ಲ. ಈ ಆಟದಲ್ಲಿ ಕೆಲ ವಿಶಿಷ್ಟ ವರ್ಚ್ಯುವಲ್ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.


ಇದರಿಂದ ಆಟಗಾರ ಬಹಳ ಶಕ್ತಿಶಾಲಿ ಎಂಬ ಸಂದೇಶ ಇತರ ಆಟಗಾರರಿಗೆ ಸಿಗುತ್ತದೆ. ಅಂತಹ ವಸ್ತುಗಳನ್ನು ಖರೀದಿಸಲು ಈ ಯುವಕ ಸಾಲವನ್ನು ಮಾಡಿದ್ದು, ಮೃತ ಯುವಕನನ್ನು ಪ್ರವೀಣ್ ಪಾಟೀಲ್(20) ಎಂದು ಗುರುತಿಸಲಾಗಿದೆ. ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರವೀಣ್, ಕಲಬುರಗಿ ನಗರದ ಖಾಸಗಿ ಕಾಲೇಜ್ ನಲ್ಲಿ ಬಿಇ ವಿಧ್ಯಾಬ್ಯಾಸ ಮಾಡುತ್ತಿದ್ದು, ಅಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್‍ ವಿಷಯದಲ್ಲಿ ಬಿಇ ಕೋರ್ಸ್ ಮಾಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕುಂತೂರು: ಮಾರ್-ಇವಾನಿಯೋಸ್ ಕಾಲೇಜಿನಲ್ಲಿ 'ಕನಕ ಜಯಂತಿ' ಆಚರಣೆ

error: Content is protected !!
Scroll to Top