ಗೃಹಜ್ಯೋತಿ ಯೋಜನೆ..! – 4 ದಿನಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ವರ್ ಸಮಸ್ಯೆಯ ಮಧ್ಯೆಯೂ (ಜೂನ್​ 21) ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿತ್ತು. ಮೊದಲ ದಿನ – 96,305, ಎರಡನೆಯ ದಿನ- 3,34,845 ಮೂರನೇ ದಿನ 4,64,225 ಹಾಗೂ ನಾಲ್ಕನೇ ದಿನ (ಬುಧವಾರ) 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಇಂದಿನಿಂದ ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ಇಂದಿನಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳಲ್ಲಿ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.

 

error: Content is protected !!

Join the Group

Join WhatsApp Group