ಕಾರು ಹೊಂದಿರುವ ಕುಟುಂಬಕ್ಕೆ ‘ಬಿಪಿಎಲ್’ ಕಾರ್ಡ್ ರದ್ದು- ಆಹಾರ ಸಚಿವರಿಂದ ಮಹತ್ವದ ಮಾಹಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 04. ಸ್ವಂತ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಪಿಎಲ್ ಕಾರ್ಡುದಾರರಿಗೆ ಬಿಸಿ ಸುದ್ದಿಯೊಂದನ್ನು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಆಹಾರ ಸಚಿವ ಮುನಿಯಪ್ಪ, ಸ್ವಂತ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದರು. ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ನ್ನು ಕೂಡಾ ರದ್ದುಗೊಳಿಸಲಾಗುತ್ತದೆ. ಯಲ್ಲೋ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದರು. ಅದೇ ರೀತಿ ಹೊಸ ಪಡಿತರ ಕಾರ್ಡ್ ವಿತರಣೆಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುನಿಯಪ್ಪ ಹೇಳಿದರು.

ನೀತಿ ಸಂಹಿತಿ ಜಾರಿಯ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಇದೀಗ ಹೊಸ ಕಾರ್ಡ್ ಗಳ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜೊತೆಗೆ ಪಡಿತರ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು. ರಾಜ್ಯಕ್ಕೆ ಆಂಧ್ರ ಹಾಗೂ ತೆಲಂಗಾಣ ಅಕ್ಕಿ ನೀಡಲು ಮುಂದಾಗಿದೆ, ಒಂದು ವಾರದಲ್ಲಿ ಅಕ್ಕಿ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ಸದ್ಯಕ್ಕೆ 5 ಕೆಜಿ ಅಕ್ಕಿ ಬದಲಾಗಿ ಜನರಿಗೆ ಹಣ ಹಾಕಿದ್ದೇವೆ. ಇನ್ನು ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ ಅವರು, ಈಗಾಗಲೇ 5 ಕೆ.ಜಿ ಅಕ್ಕಿ ಬದಲು ಒಟ್ಟು 1 ಕೋಟಿ ಕುಟುಂಬಕ್ಕೆ 556 ಕೋಟಿ ಹಣ ಜಮಾ ಮಾಡಲಾಗಿದೆ ಎಂದರು.

error: Content is protected !!

Join the Group

Join WhatsApp Group