ಸಂಪಾಜೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಹಿನ್ನೆಲೆ ► ಗುಡ್ಡೆಗದ್ದೆ ಪರಿಸರದಲ್ಲಿ ಕೂಂಬಿಂಗ್ ಆರಂಭ

ಸಂಗ್ರಹ ಚಿತ್ರ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.03. ಶುಕ್ರವಾರ ಸಂಜೆ ಸಂಪಾಜೆ ಗ್ರಾಮದ ಕೊಯಿನಾಡು ಸಮೀಪದ ಗುಡ್ಡೆಗದ್ದೆ ಎಂಬಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎನ್ನಲಾಗಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯ ಆರಂಭವಾಗಿದೆ.

ಕೆಲ ದಿನಗಳ ಹಿಂದೆಯಷ್ಟೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದರು. ತದನಂತರ ಶುಕ್ರವಾರ ಸಂಜೆ ಗುಡ್ಡೆಗದ್ದೆಯ ಮಲೆಕುಡಿಯ ಜನಾಂಗದ ಕೆಲ ಮನೆಗಳಿಗೆ ಮೂವರು ನಕ್ಸಲರು ಬಂದು ತಲಾ‌ 05 ಕೆ.ಜಿ.ಯಂತೆ ಒಟ್ಟು 20 ಕೆ.ಜಿ ಅಕ್ಕಿ ಪಡೆದುಕೊಂಡಿದ್ದಾರಲ್ಲದೆ, ಆ ಮನೆಯ ಸದಸ್ಯನೊಬ್ಬನನ್ನು ಪೇಟೆಗೆ ಕಳುಹಿಸಿ ದಿನಸಿ ಸಾಮಾನುಗಳನ್ನು ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದರಂತೆ ಶನಿವಾರದಿಂದ ಪರಿಸರದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.

Also Read  ಕಡಬ, ಪುತ್ತೂರು ಉಭಯ ತಾಲೂಕುಗಳಲ್ಲಿ 20 ಮಂದಿಯಲ್ಲಿ ಕೊರೋನಾ

 

error: Content is protected !!
Scroll to Top