ಮಳೆಯ ರಜೆ ಸರಿದೂಗಿಸಲು ಶನಿವಾರದಂದು ಫುಲ್ ಕ್ಲಾಸ್ – ಆದೇಶ ಹಿಂಪಡೆದ ಶಿಕ್ಷಣಾಧಿಕಾರಿ ಕಛೇರಿ

(ನ್ಯೂಸ್ ಕಡಬ) newskadaba.com ಸುಳ್ಯ, . 04. ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ರಜಾದಿನಗಳನ್ನು ಸರಿದೂಗಿಸಲು ಶನಿವಾರದಂದು ಮಧ್ಯಾಹ್ನದ ಬಳಿಕವೂ ತರಗತಿ ನಡೆಸಿ ಪಾಠಗಳನ್ನು ಸರಿದೂಗಿಸಲು ಶಿಕ್ಷಣ ಲಾಖೆ ನಿರ್ಧರಿಸಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿತ್ತು.

ಆದರೆ, ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿರುವುದರಿಂದ ಮಳೆ ಸಂದರ್ಭ ನೀಡಿರುವ ರಜೆಯನ್ನು ಸರಿದೂಗಿಸುವ ಸಲುವಾಗಿ ಮುಂದಿನ ಜಿಲ್ಲಾಮಟ್ಟದ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಆಗಸ್ಟ್ 05ರಿಂದ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ತಿಳಿಸಿದ್ದಾರೆ.

Also Read  ಕಡಬ: ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ

error: Content is protected !!
Scroll to Top